ಉಳ್ಳಾಲ ಕಡಲತೀರ ಭಾರತೀಯ ಉಪಖಂಡದ ನೈಋತ್ಯ ಸಮುದ್ರದ ತೀರದಲ್ಲಿದೆ, ಇದು ಭಾರತದ ಕರ್ನಾಟಕದ, ಮಂಗಳೂರು ನಗರದ ದಕ್ಷಿಣಕ್ಕೆ ೧೦ ಕಿ. ಮೀ. ದೂರದಲ್ಲಿರುವ ಉಳ್ಳಾಲ ಪಟ್ಟಣದ ಪಕ್ಕದಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ತೆಂಗಿನ ಮರಗಳು, ಮೀನುಗಾರರ ಗಲ್ಲಿ, ಅಬ್ಬಕ್ಕ ದೇವಿಯ ಪಾಳುಬಿದ್ದ ಕೋಟೆ ಮತ್ತು ೧೬ ನೇ ಶತಮಾನದ ಜೈನ ದೇವಾಲಯಗಳು. ಇಲ್ಲಿ ಸಮೀಪದಲ್ಲಿ ವಿಹಾರ ಸ್ಥಳ ಕೂಡ ಇದೆ. ೪೦೦ ವರ್ಷಗಳ ಹಿಂದೆ ಮದೀನಾದಿಂದ ಉಳ್ಳಾಲಕ್ಕೆ ಬಂದಿತೆನ್ನಲಾದ ಸೈಯದ್ ಮೊಹಮ್ಮದ್ ಶೆರೆಫುಲ್ ಮದನಿಯವರ ದರ್ಗಾ ಸಮೀಪದಲ್ಲೇ ಇದೆ. == ಪ್ರವೇಶ ಸಾಧ್ಯತೆ == ಉಳ್ಳಾಲ ಕಡಲತೀರ ಸಾರ್ವಜನಿಕ ಸಾರಿಗೆಯಿಂದ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ತೊಕ್ಕೊಟ್ಟು ನಿಂದ ಉಳ್ಳಾಲ ಬಸ್ ನಿಲ್ದಾಣವನ್ನು ತಲುಪಬಹುದು, ಇದು ಕಡಲತೀರಕ್ಕೆ ಅನುಕೂಲಕರ ಪ್ರವೇಶವನ್ನು ಒದಗಿಸುತ್ತದೆ. ಸ್ಟೇಟ್ ಬ್ಯಾಂಕ್, ಕಂಕನಾಡಿ, ದೇರಳಕಟ್ಟೆ ಮತ್ತು ಮಂಗಳೂರು ನಗರದ ಇತರ ಭಾಗಗಳಿಂದ ಅನೇಕ ಸಿಟಿ ಬಸ್ಸುಗಳಿವೆ. ಕಡಲತೀರವು ಉಳ್ಳಾಲ ಬಸ್ ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಕಾಲ್ನಡಿಗೆಯ ಮೂಲಕ ಪ್ರವೇಶಿಸಬಹುದು. === ಇತರ ಪ್ರಮುಖ ಸ್ಥಳಗಳಿಂದ ದೂರ: === ಪಂಪ್‌ವೆಲ್, ಮಂಗಳೂರು - ೧೦ ಕಿ. ಮೀ. ಮುಡಿಪು ಇನ್ಫೋಸಿಸ್, ಮಂಗಳೂರು - ೧೪ ಕಿ. ಮೀ. ನವ ಮಂಗಳೂರು ಬಂದರು, ಮಂಗಳೂರು - ೧೯ ಕಿ. ಮೀ. ಪಿಲಿಕುಳ ನಿಸರ್ಗಧಾಮ, ಮಂಗಳೂರು - ೨೦ ಕಿ. ಮೀ. ತಣ್ಣೀರುಬಾವಿ ಕಡಲತೀರ, ಮಂಗಳೂರು - ೨೨ ಕಿ. ಮೀ. ಪಣಂಬೂರು ಕಡಲತೀರ, ಮಂಗಳೂರು - ೨೩ ಕಿ. ಮೀ. ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಸುರತ್ಕಲ್, ಮಂಗಳೂರು - ೨೮ ಕಿ. ಮೀ. ಕಾಸರಗೋಡು, ಕೇರಳ - ೪೦ ಕಿ. ಮೀ. ಮಣಿಪಾಲ - ೭೭ ಕಿ.ಮೀ ಧರ್ಮಸ್ಥಳ - ೭೮ ಕಿ. ಮೀ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ - ೧೦೬ ಕಿ. ಮೀ. ಕಣ್ಣೂರು, ಕೇರಳ - ೧೩೦ ಕಿ. ಮೀ. ಮೈಸೂರು - ೨೫೫ ಕಿ. ಮೀ. ಬೆಂಗಳೂರು - ೩೭೫ ಕಿ. ಮೀ. === ಹತ್ತಿರದ ರೈಲು ನಿಲ್ದಾಣಗಳು: === ಉಳ್ಳಾಲ ರೈಲು ನಿಲ್ದಾಣ, ಉಳ್ಳಾಲ, ಮಂಗಳೂರು - ೩ ಕಿ. ಮೀ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ಹಂಪನಕಟ್ಟೆ, ಮಂಗಳೂರು - ೧೦ ಕಿ. ಮೀ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಪಡೀಲ್, ಮಂಗಳೂರು - ೧೧ ಕಿ. ಮೀ. ಸುರತ್ಕಲ್ ರೈಲು ನಿಲ್ದಾಣ, ಸುರತ್ಕಲ್, ಮಂಗಳೂರು - ೨೬ ಕಿ. ಮೀ. === ಹತ್ತಿರದ ವಿಮಾನ ನಿಲ್ದಾಣ: === ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಭಾರತ) - ೨೨ ಕಿ. ಮೀ. == ಹವಾಮಾನ == ಮಂಗಳೂರು, ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದೆ ಮತ್ತು ನೈಋತ್ಯ ಮಾನ್ಸೂನ್‌ನ ಅರೇಬಿಯನ್ ಸಮುದ್ರದ ಶಾಖೆಯ ನೇರ ಪ್ರಭಾವಕ್ಕೆ ಒಳಪಟ್ಟಿದೆ. == ಸಹ ನೋಡಿ == ಉಳ್ಳಾಲ ಪಣಂಬೂರು ಕಡಲತೀರ ತಣ್ಣೀರಭಾವಿ ಕಡಲತೀರ ಸಸಿಹಿತ್ಲು ಕಡಲತೀರ ಸೋಮೇಶ್ವರ ಕಡಲತೀರ ಪಿಲಿಕುಳ ನಿಸರ್ಗಧಾಮ ಕದ್ರಿ ಉದ್ಯಾನವನ ಸಂತ ಅಲೋಶಿಯಸ್ ಚಾಪೆಲ್ == ಉಲ್ಲೇಖಗಳು ==